ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ನೇಮಕಾತಿ

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ನೇಮಕಾತಿ 2022: ತಿಂಗಳಿಗೆ ₹ 28,000 ಸಂಬಳ, SSLC ಪಾಸಾದವರಿಗೆ ಬಂಪರ್ ಸರ್ಕಾರಿ ಉದ್ಯೋಗ,

 

 

ಫೆಬ್ರವರಿ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

 

 

 

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 7 ದಲಯಾತ್ (ಗ್ರೂಪ್​ ಡಿ)​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ksat.karnataka.gov.in ಗೆ ಭೇಟಿ ನೀಡಿ.

 

 

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

 

 

 

ಸಂಸ್ಥೆ

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

 

ಹುದ್ದೆಯ ಹೆಸರು

ದಲಯಾತ್ (ಗ್ರೂಪ್​ ಡಿ)​

 

ಒಟ್ಟು ಹುದ್ದೆಗಳು

07

 

ವಿದ್ಯಾರ್ಹತೆ

10ನೇ ತರಗತಿ ಪಾಸ್

 

ಉದ್ಯೋಗದ ಸ್ಥಳ

ಬೆಂಗಳೂರು

 

ಅರ್ಜಿ ಸಲ್ಲಿಕೆ ವಿಧಾನ

ಆಫ್​ಲೈನ್​

 

ಅರ್ಜಿ ಸಲ್ಲಿಕೆ ಆರಂಭ ದಿನಾಂಕ

09/02/2022

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

25/02/2022

 

 

 

ವಿದ್ಯಾರ್ಹತೆ:

 

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ದಲಯಾತ್ (ಗ್ರೂಪ್​ ಡಿ)​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.

 

 

 

ವಯೋಮಿತಿ:

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ದಲಯಾತ್ (ಗ್ರೂಪ್​ ಡಿ)​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 25, 2022ಕ್ಕೆ 18-35 ವರ್ಷದೊಳಗಿರಬೇಕು.

 

 

 

ವಯೋಮಿತಿ ಸಡಿಲಿಕೆ:

 

OBC ಅಭ್ಯರ್ಥಿಗಳು(2ಎ,2ಬಿ, 3ಎ, 3ಬಿ): 03 ವರ್ಷ

 

SC/ST/Cat-I ಅಭ್ಯರ್ಥಿಗಳು: 05 ವರ್ಷ

 

PH/ವಿಧವಾ ಅಭ್ಯರ್ಥಿಗಳಿಗೆ: 10 ವರ್ಷ

 

ಅರ್ಜಿ ಶುಲ್ಕ:

 

SC/ST/Cat-I/ PH ಅಭ್ಯರ್ಥಿಗಳು- ಯಾವುದೇ ಅರ್ಜಿ ಶುಲ್ಕ ಕಟ್ಟುವಂತಿಲ್ಲ.

 

ಉಳಿದ ಎಲ್ಲಾ ಅಭ್ಯರ್ಥಿಗಳಿಗೆ- 150 ರೂ.

 

ಅರ್ಜಿ ಶುಲ್ಕ ಪಾವತಿ ವಿಧಾನ: ಡಿಡಿ/ಐಪಿಒ

 

ವೇತನ:

 

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ದಲಯಾತ್ (ಗ್ರೂಪ್​ ಡಿ)​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 17,000-28,950 ವೇತನ ನೀಡಲಾಗುತ್ತದೆ.

 

 

 

ಅರ್ಜಿ ಸಲ್ಲಿಸುವುದು ಹೇಗೆ

 

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

 

ಕರೆಸ್ಪಾಂಡೆಂಟ್​

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

ಕಂದಾಯ ಭವನ

7ನೇ ಮಹಡಿ, ಕೆ.ಜಿ.ರಸ್ತೆ

ಬೆಂಗಳೂರು-560009

 

ಪ್ರಮುಖ ದಿನಾಂಕಗಳು:

 

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/02/2022

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25/02/2022

 

GO TO OFFICIAL WEBSITE

Leave A Reply

Your email address will not be published.